ಕೊಳವೆ ಬಾವಿ ಅಥವಾ ಬಾವಿ ಕೊರೆಸಲು ಒಳ್ಳೆಯ ನಕ್ಷತ್ರ ಯುವುದೆಂದರೆ ಉತ್ತರಾ ಭಾದ್ರ, ರೋಹಿಣಿ, ಉತ್ತರ ಷಾಡ.
ಸ್ನೇಹಿತರೆ,
ಒಂದು ಮನೆಗೆ ಸರಿಯಾದ ನೀರಿನ ವ್ಯವಸ್ಥೆ ಇರಲೇಬೇಕು. ಈಗಂತೂ ಎಲ್ಲ ಹಳ್ಳಿ/ಪಟ್ಟಣಗಳಲ್ಲಿ ಹೊಸದಾಗಿ ಮನೆಗಳನ್ನು ಕಟ್ಟಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿಮ್ಮ ಬಡಾವಣೆಗಳು ಹೊಸದಾಗಿದ್ದರೆ, ಅಲ್ಲಿಗೆ ನಾಮಾನ್ಯವಾಗಿ ಕಾರ್ಪೋರೇಶನ್ ನೀರಿನ ಸರಬರಾಜು ಸರಿಯಾಗಿ ಇರುವುದಿಲ್ಲ.
ಇನ್ನು ಕೆಲವು ಜನರು ಒಂದಷ್ಟು ವರ್ಷಗಳವರೆಗೆ ಬೆಂಗಳೂರಿನಂತ ನಗರಗಳಲ್ಲಿ ಅಥವಾ ವಿದೇಶಗಳಲ್ಲಿ ಕೆಲಸಮಾಡಿ ನಿವೃತ್ತಿ ಜೀವನ ಕಳೆಯುವುದಕ್ಕಾಗಿ ಹೊಲಗಳನ್ನು ಖರೀದಿ ಮಾಡುತ್ತಿದ್ದಾರೆ. ಹೊಲಗಳಿಗಂತೂ ನಿಮ್ಮದೇ ನೀರಿನ ವ್ಯವಸ್ಥೆ ಇರಲೇಬೇಕು.
ಪರಿಸ್ಥಿತಿ ಹೀಗೆ ಇರುವಾಗ, ನಿಮಗೆ ಯಾವುದೇ ಪರ್ಯಾಯ ಮಾರ್ಗಗಳು ಇಲ್ಲದಿರುವಾಗ, ನಮಗೆ ಹೊಳೆಯುವುದೇ ಒಂದು ಮಾರ್ಗ, ಅದುವೇ ನಮ್ಮದೇ ಆದ ಬಾವಿ ಅಥವಾ ಕೊಳವೆ ಬಾವಿ ಕೊರೆಸುವುದು.
ಬಾವಿ ಅಥವಾ ಕೊಳವೆಬಾವಿ ಕೊರೆಸುವುದಕ್ಕೆ ಎಲ್ಲ ಅನುಕೂಲವನ್ನು (ಉದಾಹರಣೆಗೆ, ಬೇಕಾಗಿರುವ ಹಣ, ಬೋರ್ವೆಲ್ ಪಾಯಿಂಟ್ ಇತ್ಯಾದಿ) ಮಾಡಿಕೊಂಡ ನಂತರ, ಮುಂದೆ ಸಾಮಾನ್ಯವಾಗಿ ನೋಡುವುದು, ಯಾವ ದಿನದಲ್ಲಿ ಬಾವಿ/ಕೊಳವೆ ಬಾವಿ ತೋಡಿಸಿದರೆ ಶುಭವಾಗುತ್ತದೆ ಅಂತ.
ಈ ಲೇಖನದಲ್ಲಿ ಬಾವಿ ತೊಡಿಸುವುದಕ್ಕೆ ವಾಸ್ತು ಪ್ರಕಾರದ ಕೆಲವೊಂದು ನಿಯಮಗಳನ್ನು ಕೆಳಗೆ ನೋಡೋಣ. ಕೆಳಗೆ ಕೊಟ್ಟಿರುವ ಮಾಹಿತಿ, ಸಾಮಾನ್ಯ (General) ಮಾಹಿತಿ. ನೀವು ವಾಸ್ತುತಜ್ಞರನ್ನು ಸಂಪರ್ಕಿಸಿ ಅಧಿಕ ಮಾಹಿತಿ ಪಡೆಯಿರಿ.
- ನಿಮ್ಮ ನಿವೇಶನದಲ್ಲಿ ಅಥವಾ ಹೊಲದಲ್ಲಿ ಪೂಜೆ ಮಾಡಿದ ನಂತರಷ್ಟೇ ಬಾವಿ ಅಥವಾ ಕೊಳವೆ ಬಾವಿ ತೊಡಿಸಬೇಕು.
- ನೀರಿನ ಪಾಯಿಂಟ್ (ಮೂಲ) ನಿಮ್ಮ ನಿವೇಶನದ ಉತ್ತರ (North) ಅಥವಾ ಈಶಾನ್ಯ (North East) ಮೂಲೆಯಲ್ಲಿದ್ದರೆ ಒಳ್ಳೆಯದು.
- ಬಾವಿಯು ಚೌಕಕಾರವಾಗಿರಬಾರದು.
- ಬಾವಿಯು ವೃತ್ತಾಕಾರವಾಗಿರಬೇಕು.
- ಬಾವಿಯ ಒಳಗೆ ಬಿಸಿಲು ಬೀಳುವಂತಿರಬೇಕು. ನಿಮ್ಮ ಬಾವಿಗೆ ಒಣಗಿದ ಎಲೆ ಅಥವಾ ಕಡ್ಡಿಗಳು ಬೀಳುತ್ತಿದ್ದರೆ, ಬಾವಿಯ ಮೇಲ್ಭಾಗದಲ್ಲಿ mesh (ಪರದೆ) ಮುಚ್ಚಬಹುದು.
- ಬಾವಿ/ಬೋರ್ ವೆಲ್ ಕೊರೆಸಿದ ನಂತರ ಮನೆ ನಿರ್ಮಾಣ ಆರಂಭಿಸಬಹುದು.
- ಮನೆ ನಿರ್ಮಾಣ ಮಾಡುವಾಗ ಇದೆ ನೀರು ಉಪಯೋಗಿಸುವುದು ಒಳ್ಳೆಯದು ಅನ್ನುತ್ತದೆ ವಾಸ್ತು.
- ನಿಮ್ಮ ಬಾವಿಯ ನೀರನ್ನು ಬೇರೆ ಮನೆಯವರ ಜೊತೆ ಹಂಚಿಕೊಳ್ಳಬಾರದು.
- ಕೃಷ್ಣ ಪಕ್ಷದಲ್ಲಿ (Lunar Days) 4ನೇ, 9ನೇ ಮತ್ತು 14ನೇ ದಿವಸಬಿಟ್ಟು, ಬೇರೆ ದಿನಗಳು ಒಳ್ಳೆಯದು.
- ಈ ಕೆಲಸಕ್ಕೆ, ಒಳ್ಳೆ ನಕ್ಷತ್ರಗಳು ಯಾವುದೆಂದರೆ, ಉತ್ತರ ಫಾಲ್ಗುಣಿ, ಉತ್ತರಾಷಾಡ, ಉತ್ತರಾಭಾದ್ರ, ರೋಹಿಣಿ ಇವುಗಳನ್ನು ಸ್ಥಿರ ನಕ್ಷತ್ರಗಳು.
- ಸ್ಥಿರ ನಕ್ಷತ್ರಗಳಲ್ಲದೆ, ಆಶ್ಲೇಷ, ವೈಶಾಖ, ಕೃತಿಕಾ, ಭರಣಿ ಹಾಗು ಮಘ ನಕ್ಷತ್ರಗಳು ಕೂಡ ಹೊಂದಾಣಿಕೆ ಆಗುತ್ತದೆ.
- ಇದಲ್ಲದೆ ಒಳ್ಳೆ ಯೋಗವನ್ನು ನೋಡಬಹುದು, ಅವುಗಳಾವುದೆಂದರೆ, ಸಿದ್ದಿ ಯೋಗ, ಸರ್ವರ್ಥ ಸಿದ್ದಿ ಯೋಗ ಹಾಗು ಅಮೃತ್ ಸಿದ್ದಿ ಯೋಗ
ಇವಿಷ್ಟು ಬೋರ್ ವೆಲ್ (ಕೊಳವೆ ಬಾವಿ), ಬಾವಿ ಕೊರೆಸುವಾಗ ನೋಡಬೇಕಾದಾಗ ಒಂದಷ್ಟು ವಾಸ್ತು ನಿಯಮಗಳು. ಇದು ಸಂಪೂರ್ಣವಾದ ನಿಯಮಗಳ ಪಟ್ಟಿಯಲ್ಲ. ಮೇಲೆ ತಿಳಿಸಿದಂತೆ, ನೀವು ಒಳ್ಳೆಯ ವಾಸ್ತು ತಜ್ಞರನ್ನು ಕೇಳಿಕೊಂಡು ಮುಂದುವರೆಯಿರಿ.
ನಿಮ್ಮ ಯಾವುದೇ ಸಲಹೆ ಅಥವಾ ಅಭಿಪ್ರಾಯಗಳನ್ನು ನನ್ನ ಇಮೇಲ್ ID ಗೆ ಕಳುಹಿಸಿಕೊಡಿ. ನನ್ನ ಇಮೇಲ್ ID ‘CoolHomeTechPraveen@gmail.com’
ಧನ್ಯವಾದಗಳು
ಪ್ರವೀಣ್ ಕುಮಾರ್ 🙂