ಸ್ನೇಹಿತರೆ,
ಈ ಲೇಖನದಲ್ಲಿ ನಾನು ನಿಮಗೆ ನಿಮ್ಮ ಹೊಲದಲ್ಲಿ ಅಥವಾ ನಿವೇಶನದಲ್ಲಿ ಬೋರ್ವೆಲ್ ಕೊರೆಸುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುತ್ತೇನೆ. ಈಗ ಸುಮಾರು 10/15 ವರ್ಷದ ಹಿಂದೆ ನೀರಿಗಾಗಿ ಈ ತರ ನಾವು ಪರಿತಪಿಸಬೇಕಾಗಿರಲಿಲ್ಲ.
ಮಲೆನಾಡಿನಲ್ಲಿ ಹುಟ್ಟಿ ಬೆಳೆದುಬಂದ ನಾನು, ಯಾವತ್ತೂ ಕುಡಿಯುವ ಹಾಗೂ ದಿನಬಳಕೆಯ ನೀರಿಗಾಗಿ ತುಂಬಾ ತಲೆಕೆಡಿಸಿಕೊಂಡಿಲ್ಲ. ಆದರೆ ನಾನು ಯಾವಾಗ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದೆನೋ, ಆಗ ಇಲ್ಲಿ ದಿನಬಳಕೆಯ ನೀರಿಗಾಗಿ ಜನ ಎಷ್ಟು ಕಷ್ಟ ಪಡುತ್ತಾರೆ ಎಂದು ಗೊತ್ತಾಯಿತು. ಸ್ವಲ್ಪಮಟ್ಟಿಗೆ ಕಾವೇರಿ ನೀರು ಸರಬರಾಜು ಇದ್ದರೂ 50% ಕಿಂತಲೂ ಹೆಚ್ಚು ಭಾಗದ ಬೆಂಗಳೂರಿಗೆ ಕೊಳವೆ ಬಾವಿ ನೀರೇ ಆಧಾರ.
ಮೇಲಿನ ಪರಿಸ್ಥಿತಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇಂದು ಇದು ಸುಮಾರು ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಇದೆ ಪರಿಸ್ಥಿತಿ ಇದೆ. ಈಗ ಮಲೆನಾಡಿನಲ್ಲೂ ಕೂಡ ಜನರು ಕೊಳವೆಬಾವಿಗೆ ಮೊರೆ ಹೋಗುತ್ತಿದ್ದಾರೆ. ಅಂದರೆ ನೀರಿನಮಟ್ಟ ದಿನೇ ದಿನೇ ಎಷ್ಟು ಆಳಕ್ಕೆ ಇಳಿಯುತ್ತಿದೆ ಅಂತ ನೀವು ಅಂದಾಜು ಮಾಡಬಹುದು.
ಈಗ ನೇರವಾಗಿ Topic ಗೆ ಬರೋಣ. ನೀವು ಬೋರ್ವೆಲ್ ಕೊರೆಸಬೇಕಾದರೆ ಯಾವ ಯಾವ ಮಾಹಿತಿ ಗೊತ್ತಿದ್ದರೆ ಒಳ್ಳೆಯದು ಅಂತ ನೋಡೋಣ.
Table of Contents
1. Borewell ಕೊರೆಸಲು ಅನುಮತಿ ಅಥವಾ ಪರವಾನಿಗೆ ಪಡೆಯುವುದು
ಬೆಂಗಳೂರಿನಂತಹ ಮಹಾ ನಗರಗಳಲ್ಲಿ ನೀವು ಕೊಳವೆಬಾವಿ ಕೊರೆಸಬೇಕೆಂದರೆ ನೀವು ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ’ (BWSSB) ಇಂದ ಅನುಮತಿಯನ್ನು ಪಡೆಯಬೇಕು. ಇದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಇದಕ್ಕಾಗಿ ನೀವು Google ನಲ್ಲಿ ‘bwssb borewell application’ ಅಂತ ಟೈಪ್ ಮಾಡಿ. Form – 1B ತುಂಬಿಸಿ, 500/- ಮೊತ್ತದ Challan ಲಗತ್ತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, Form – 1B ಅನ್ನು ವಿಸ್ತಾರವಾಗಿ ಓದಿ. ಈ ಕೆಲಸ ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ, ಇದನ್ನು 2 ತಿಂಗಳ ಮುಂಚೆಯೇ ಪ್ರಾರಂಭಿಸಿ. ನಿಮ್ಮ Application ಸಲ್ಲಿಸಿದ ನಂತರ, ಒಂದು Acknoledgement ಕೊಡುತ್ತಾರೆ. ಇದನ್ನು ಭದ್ರವಾಗಿ ಇರಿಸಿಕೊಳ್ಳಿ.
ರೈತರ ಭೂಮಿಯಲ್ಲಿ ಕೊಳವೆಬಾವಿ ಕೊರೆಸಲಿಕ್ಕೆ ಅನುಮತಿಯ ಅವಶ್ಯಕತೆ ಸದ್ಯಕ್ಕೆ ಇರುವುದಿಲ್ಲ. ನೀವು ನಿಮ್ಮ ಊರಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಒಮ್ಮೆ ಕೇಳಿನೋಡಿ.
ಈಗ ಅನುಮತಿ ಪಡೆದ ಮೇಲೆ ಮುಂದೆ ಏನು ಮಾಡುವುದು ಅಂತ ನೋಡೋಣ.
2. Borewell ಕೊರೆಸಲು ನೀರಿನ point ಕಂಡುಹಿಡಿಯುವುದು
ನಿಮ್ಮ ಹೊಲದಲ್ಲಿ ಅಥವಾ ನಿವೇಶನದಲ್ಲಿ ನೀರಿನ point ಕಂಡುಹಿಡಿಯುವುದು ಒಂದು ಮಹತ್ವದ ಕೆಲಸ. ನೀರಿನ point ಕಂಡು ಹಿಡಿಯಲು ಕೆಲವೊಂದು ಮಾರ್ಗಗಳು ಇವೆ. ನಾನು ಕೆಳಗೆ ತಿಳಿಸಿರುವ ಮಾರ್ಗಗಳು ವೈಜ್ಞಾನಿಕವಾಗಿದ್ದು. ಬೇರೆ ಬೇರೆ ಮಾರ್ಗಗಳಿರಬಹದು, ಆದರೆ ಅದರ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ.
ಒಂದನೇ ವಿಧಾನ: ನೀವು ಒಳ್ಳೆ ತಿಳುವಳಿಕೆ ಇರುವ ಮತ್ತು ತುಂಬಾ ಅನುಭವವಿರುವ ಭೂವಿಜ್ಞಾನಿಯನ್ನು (Geologist) ಸಂಪರ್ಕಿಸಬಹುದು. ಇವರು ತಮ್ಮ ಅನುಭವವನ್ನು ಮತ್ತು ಉಪಕರಣವನ್ನು ಬಳಸಿಕೊಂಡು Point ಗುರುತಿಸುತ್ತಾರೆ. ಇವರು ನಿಮಗೆ ಸಾಮಾನ್ಯವಾಗಿ ಎರಡು ಅಥವಾ ಮೂರು Point ಗಳನ್ನೂ ಗುರುತು ಮಾಡಿಕೊಡುತ್ತಾರೆ .
ಪಾಯಿಂಟ್ಸ್ ಗುರುತಿಸಿದ ಮೇಲೆ ಇವರು ನಿಮಗೆ ಒಂದು ರಿಪೋರ್ಟ್ ಬರೆದುಕೊಡುತ್ತಾರೆ. Report ಕೆಳಗೆ ನಿಮ್ಮ reference ಗೆ ಕೊಟ್ಟಿರುತ್ತೇನೆ. ಈ ರಿಪೋರ್ಟ್ ಕೆಳಗೆ ತಿಳಿಸಿದ ಮಾಹಿತಿಯನ್ನು ಒಳಗೊಂಡಿರುತ್ತದೆ. ಇವರ Charges 2 ರಿಂದ 5 ಸಾವಿರದಷ್ಟು ಇರುತ್ತದೆ. (ನನಗೆ ಗೊತ್ತಿರುವ ಪ್ರಕಾರ )
- ಮಾಹಿತಿಯ ಪಟ್ಟಿ.
ಎಷ್ಟು ಆಳದವರೆಗೆ (Depth) borewell ಕೊರೆಸಬೇಕು
- ಎಷ್ಟು Points ಸಿಗುತ್ತದೆ
- ಎಷ್ಟು ಇಂಚು ನೀರು ಸಿಗುತ್ತದೆ
- ಯಾವ ಯಾವ ಆಳದಲ್ಲಿ (Depth) ನೀರು ಸಿಗುತ್ತದೆ
- ಕೇಸಿಂಗ್ ಪೈಪ್ ಎಷ್ಟು Feet ಹಾಕಬೇಕು
- ಭೂಗರ್ಭದಲ್ಲಿನ ಬಂಡೆಗಳ ಬಗ್ಗೆ ಇತ್ಯಾದಿ ಇತ್ಯಾದಿ

ಎರಡನೇ ವಿಧಾನ: ಈ ವಿಧಾನ ಸ್ವಲ್ಪ ಇತ್ತೀಚಿನದು. ಇದನ್ನು 3D Points ವಿಧಾನ ಎಂದು ಕರೆಯುತ್ತಾರೆ. ಇದಕ್ಕೂ ಕೂಡ ನುರಿತ ತಜ್ಞರ ಅವಶ್ಯಕತೆ ಇದೆ. ಈ ವಿಧಾನದಲ್ಲಿ ಮೊದಲು ನಿಮ್ಮ ನಿವೇಶನ ಅಥವಾ ಹೊಲವನ್ನು ಪೂರ್ಣವಾಗಿ ಸರ್ವೇ ಮಾಡುತ್ತಾರೆ. ಅನಂತರ ನಿಖರವಾಗಿ ಪಾಯಿಂಟ್ ಗಳನ್ನೂ ಗುರುತಿಸುತ್ತಾರೆ. ಈ ವಿಧಾನದಿಂದ ಬಂಡೆಗಳ ಮಧ್ಯದಲ್ಲಿರುವ ಬಿರುಕುಗಳು ಪತ್ತೆಯಾಗುತ್ತವೆ. ಈ ಬಿರುಕುಗಳಲ್ಲಿ ನೀರು ದೊರೆಯುವ ಸಾಧ್ಯತೆಗಳು ಅಧಿಕ.
3. Borewell ಕೊರೆಸಲು Borewell Drill ಮಾಡುವವರನ್ನು ಸಂಪರ್ಕಿಸುವುದು
ಈ ಹಂತದಲ್ಲಿ ನೀವು ಕೊಳವೆಬಾವಿ ಕೊರೆಯುವ Vendor ಗಳನ್ನೂ ಸಂಪರ್ಕಿಸಬೇಕಾಗುತ್ತದೆ. ಅವರು ನಿಮಗೆ 1200 ಅಡಿ ಕೊರೆಯಲು ಎಷ್ಟು ಖರ್ಚು ಆಗುತ್ತದೆ ಎಂದು ತಿಳಿಸುತ್ತಾರೆ. ಅವರು ನಿಮಗೆ ಒಂದು Quotation ಕೊಡುತ್ತಾರೆ. ಅದರಲ್ಲಿ ಪ್ರತಿ Feet ಗೆ ಎಷ್ಟು ಖರ್ಚು ಆಗುತ್ತದೆ ಅಂತ ತಿಳಿಸುತ್ತಾರೆ. ಇದು Borewell ಕೊರೆಯುವ ಖರ್ಚು.
ಕೊರೆಯುವ ಖರ್ಚಲ್ಲದೆ ನೀವು ಬೇರೆ ಬೇರೆ ಖರ್ಚನ್ನು ಕೂಡ ನೋಡಬೇಕಾಗುತ್ತದೆ. ಉದಾಹರಣೆಗೆ, ಕೇಸಿಂಗ್ ಪೈಪ್ ಎಷ್ಟು ಅಡಿ ಆಳಕ್ಕೆ ಹಾಕಬೇಕು ಇತ್ಯಾದಿ. ಕೇಸಿಂಗ್ ಪೈಪ್ ನಿಮಗೆ ಪ್ರತಿ ಅಡಿ ಲೆಕ್ಕದಲ್ಲಿ Charge ಮಾಡುತ್ತಾರೆ. ನೀವು ನೂರು ಅಡಿ ಆಳಕ್ಕೆ ಪೈಪ್ ಹಾಕಿಸಿದರೆ ನಿಮಗೆ 40,000/- ಖರ್ಚು ಆಗುತ್ತದೆ (ಪ್ರತಿ ಅಡಿಗೆ 400/- ಅಂತ ತೆಗೆದುಕೊಂಡರೆ.)
ಕೆಳಗೆ ನಿಮ್ಮ reference ಕ್ಕಾಗಿ ಒಂದು quotation ಕೊಟ್ಟಿರುತ್ತೇನೆ. ಇದನ್ನು ಒಂದು ಸಲ ನೋಡಿ.

4. Borewell ಕೊರೆದ ಮೇಲೆ Filter Pipe ಹಾಕಿಸುವುದು.
ಕೆಲವೊಮ್ಮೆ ಏನಾಗುತ್ತದೆಯೆಂದರೆ, borewell ಕೊರೆಸುವಾಗ ಭೂಮಿಯ ಕೆಲವೊಂದು ಆಳದಲ್ಲಿ ಸಣ್ಣ ಸಣ್ಣ ಕಲ್ಲುಗಳ ಪದರದಿಂದ ಕೆಳಗೆ ಹೋಗಬೇಕಾಗುತ್ತದೆ. ಇದನ್ನು ‘Bodres Layer’ ಅಂತ ಕರೆಯುತ್ತಾರೆ. ಈ ‘Bodres Layer’ ನಿಂದ ನಿಮ್ಮ ಬೋರ್ವೆಲ್ ಗೆ ತೊಂದರೆಯಾಗಬಹುದು. ಏಕೆಂದರೆ ಇಲ್ಲಿಂದ ಸಣ್ಣ ಸಣ್ಣ ಕಲ್ಲು ಕೆಳಗೆ ಬಿದ್ದು ನಿಮ್ಮ ಬೋರ್ವೆಲ್ ತಳಪಾಯ ತುಂಬಿಹೋಗುವ ಸಾಧ್ಯತೆ ಇರುತ್ತದೆ.
ಮೇಲೆ ತಿಳಿಸಿದ ಸಮಸ್ಯೆಗೆ ಪರಿಹಾರವೆಂದರೆ, Filter Pipe ಹಾಕಿಸುವುದು. ನಿಮ್ಮ 6.5 ಇಂಚ್ ಬೋರ್ವೆಲ್ ಒಳಗೆ 4 ಇಂಚ್ PVC casing ಪೈಪ್ ಇಳಿಸುತ್ತಾರೆ. ಇದರಿಂದ ನಿಮ್ಮ borewell ಗೆ Bodres ಪದರದಿಂದ ರಕ್ಷಣೆ ಸಿಗುತ್ತದೆ. ಈ ಕೆಲಸಕ್ಕೆ ನಿಮಗೆ ಖರ್ಚು ಹೆಚ್ಚು. ನಿಮಗೆ ಒಂದು ಅಂದಾಜು ಕೊಡುವುದಾದರೆ, 800 ಅಡಿ Filter Pipe ಗೆ 1 ಲಕ್ಷದವರೆಗೂ ಖರ್ಚು ಬೀಳಬಹುದು. ಕೆಳಗಿನ ಚಿತ್ರದಲ್ಲಿ Filter-Pipe ಅಳವಡಿಸುತ್ತಿರುವುದನ್ನು ನೀವು ನೋಡಬಹುದು.

ನಾನು ನನ್ನ Youtube ಚಾನೆಲ್ ನಲ್ಲಿ ಬೋರ್ವೆಲ್ ಬಗ್ಗೆ ಈಗಾಗಲೇ ಸಾಕಷ್ಟು ವಿಡಿಯೋಗಳನ್ನೂ ಹಾಕಿದ್ದೇನೆ. ಇದನ್ನು ನೀವು ಕ್ಲಿಕ್ ಮಾಡಿ ನೋಡಬಹುದು.
3D locator ಬಳಸಿಕೊಂಡು ಬೋರ್ವೆಲ್ ಪಾಯಿಂಟ್ ಹೇಗೆ ಗುರುತು ಮಾಡುತ್ತಾರೆ ? ಕೆಳಗಿನ ವಿಡಿಯೋ ನೋಡಿ.
Borewell ಕೊರೆಸುವ ಬಗ್ಗೆ ನಿಮ್ಮ ಸ್ವಲ್ಪ ಸಂದೇಹಗಳಿಗೆ ಪರಿಹಾರ ಸಿಕ್ಕಿದೆ ಅಂದುಕೊಂಡಿದ್ದೇನೆ. ನಿಮಗೆ ಇನ್ನು ಏನಾದರೂ ಮಾಹಿತಿ ಬೇಕೆಂದರೆ, ನನ್ನ email ID ಗೆ ನಿಮ್ಮ ಇಮೇಲ್ ಕಳುಹಿಸಬಹುದು. ನನ್ನ ಇಮೇಲ್ ID ‘CoolHomeTechPraveen@gmail.com’. ಈ ಲೇಖನ ಇಷ್ಟವಾದಲ್ಲಿ ಇದನ್ನು ಇತರರಿಗೆ ಹಾಗು ಅಗತ್ಯತೆ ಇರುವವರಿಗೆ Share ಮಾಡಿ. ಕೆಳಗಡೆ ಸೋಶಿಯಲ್ ಮೀಡಿಯಾ ಚಿತ್ರವನ್ನು ಕ್ಲಿಕ್ಲ್ ಮಾಡಿ ಈ ಮಾಹಿತಿಯನ್ನು ಹಂಚಿ.
ಧನ್ಯವಾದಗಳು 🙂
ಪ್ರವೀಣ್ ಕುಮಾರ್