ಭಾರತದ ಪ್ರಮುಖ 5 ಬೋರ್ ವೆಲ್ (ಕೊಳವೆಬಾವಿ) ಪಂಪುಗಳು ಯಾವುದು? ।। ಭಾರತದ ಪ್ರಮುಖ 5 Borewell Pumps ಯಾವುದು?

ಭಾರತದಲ್ಲಿ ಬಹಳಷ್ಟು ಬೋರ್ ವೆಲ್ ಪಂಪ್ ಸೆಟ್ ತಯಾರಿಕರು ಇದ್ದಾರೆ. ಇದರಲ್ಲಿ ಯಾವ ಕಂಪನಿ ಪ್ರಖ್ಯಾತ ಅಂತ ಈ ಲೇಖನದಲ್ಲಿ ತಿಳಿಯೋಣ.

ಸ್ನೇಹಿತರೆ,

ನಮ್ಮ ದೇಶ ಒಂದು ಕೃಷಿ ಪ್ರಧಾನ ದೇಶ. ಇಲ್ಲಿ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಕೋಟ್ಯಾಂತರ ಜನರಿದ್ದಾರೆ. ಯಾವುದೇ ಬೆಳೆ ಬೆಳೆಯಲು ಮೂಲಭೂತವಾಗಿ ಬೇಕಾಗಿರುವುದು ನೀರು. ನಮ್ಮ ದೇಶದಲ್ಲಿ ನೀರಿಗಾಗಿ ಅಂತರ್ಜಲದ (ಕೊಳವೆ ಬಾವಿ/ಬೋರ್ ವೆಲ್ ) ಅವಲಂಬನೆ ಅಧಿಕವಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 2.7 ಕೋಟಿಗಳಷ್ಟು ಕೊಳವೆಬಾವಿಗಳಿವೆ (Borewells). ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಈಗಾಗಲೇ ಬತ್ತಿ ಹೋಗಿವೆ.

ಇದಲ್ಲದೆ ನಗರ ಪ್ರದೇಶದಲ್ಲಿ ಮನೆ ಬಳಕೆಗಾಗಿ ಕೂಡ ಅಂತರ್ಜಲದ ಮೇಲೆ ಅವಲಂಬನೆ ಇದೆ. ಕೊಳವೆ ಬಾವಿಯಿಂದ ನೀರನ್ನು ಮೇಲೆತ್ತಲು ಪಂಪ್ ಸೆಟ್ ಬೇಕು ಹಾಗು ಇದನ್ನು ತಯಾರು ಮಾಡುವ ನೂರಾರು ಕಂಪನಿಗಳು ಭಾರತದಲ್ಲಿ ಇವೆ.

ಇಷ್ಟೆಲ್ಲ ಬೋರ್ ವೆಲ್ ಪಂಪ್ ಕಂಪನಿಗಳ ಆಯ್ಕೆಗಳಿರುವಾಗ, ಒಂದು ಸಮಸ್ಯೆ ಉದ್ಭವವಾಗುತ್ತದೆ. ಯಾವ ಕಂಪನಿಯ ಬೋರ್ವೆಲ್ ಪಂಪ್ ಸೆಟ್ ಉತ್ತಮ ಹಾಗು ಪ್ರಖ್ಯಾತ ? ಸಾಮಾನ್ಯವಾಗಿ ಜನರು ಹೆಚ್ಚಾಗಿ ಯಾವ ಕಂಪನಿಯ ಪಂಪ್ ಗಳನ್ನೂ ಬಳಸುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.

ಕೆಳಗೆ ತಿಳಿಸಿದ ಮಾಹಿತಿ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ ನೀವು ಯಾವುದಕ್ಕೂ ನಿಮ್ಮದೇ ಆದ ವಿಶ್ಲೇಷಣೆ ಮಾಡಿಕೊಂಡು ಮುಂದುವರೆಯಿರಿ.

1. ಆಕ್ವಾ ಗ್ರೂಪ್ (Aqua Group)

Aqua Group ಒಂದು ಪ್ರಖ್ಯಾತ ಬೋರ್ ವೆಲ್ ಪಂಪುಗಳ ತಯಾರಕರು. ಇವರು ಹಲವಾರು ದಶಕಗಳಿಂದ ನಮ್ಮ ದೇಶದಲ್ಲಿದ್ದಾರೆ. ಇವರು AQUATEX ಮತ್ತು TEXMO ಬ್ರಾಂಡ್ ಗಳಿಂದ ಪ್ರಚಲಿತದಲ್ಲಿದಾರೆ.

Texmo (aqua group) company logo for education purpose

ಇವರು ಬೋರ್ ವೆಲ್ ಪಂಪುಗಳಲ್ಲದೆ, ಮೊನೊ ಬ್ಲಾಕ್, ಜೆಟ್ ಪಂಪುಗಳನ್ನೂ ಕೂಡ ತಯಾರಿಸುತ್ತಾರೆ. ಇವರಿಗೆ ಸದ್ಯ ಒಳ್ಳೆ ಹೆಸರಿದೆ. ಇವರು ತಯಾರಿಸಿದ ಪಂಪುಗಳು ಸೋಲಾರ್ ಪಂಪುಗಳಾಗಿಯೂ ಉಪಯೋಗಿಸಬಹುದು. ನಾನು ಕೆಳಗೆ ಇವರಿಗೆ ಸಂಬಂದಿಸಿದ ಕೆಲವು ಮಾಹಿತಿಯನ್ನು ಕೊಟ್ಟಿದ್ದೇನೆ.

  • 4 ಮುಖ್ಯವಾದ ಮಾಹಿತಿಗಳು
    • ಇವರ ಕಂಪನಿಯ ಪ್ರಾರಂಭ 1956 ರಲ್ಲಿ
    • ಇವರ ಕಾರ್ಖಾನೆ ಕೊಯಮತ್ತೂರಿನಲ್ಲಿ ಇದೆ
    • ಇಡೀ ಭಾರತದಲ್ಲಿ 1800 ಹೆಚ್ಚು ಡೀಲರ್ಸ್ ಇದ್ದಾರೆ
    • ಇವರ ಪಂಪುಗಳಿಗೆ ಯಾವುದೇ Warranty ಮತ್ತು ಗ್ಯಾರಂಟಿ ಇರುವುದಿಲ್ಲ (ಒಂದು ಸಲ ಇವರ ಡೀಲರ್ಸ್ ಗಳನ್ನೂ ಸಂಪರ್ಕಿಸಿ, ಪರಿಶೀಲಿಸಿ ನೋಡಿ)

ನೀವು ಇವರ ಜಾಲತಾಣಕ್ಕೆ ಭೇಟಿ ಕೊಟ್ಟು ಇನ್ನೂ ಅಗತ್ಯವಾದ ಮಾಹಿತಿಯನ್ನು ಪಡೆಯಬಹುದು. ಇಲ್ಲಿ ಕ್ಲಿಕ್ ಮಾಡಿ ಅವರ ಜಾಲತಾಣಕ್ಕೆ ಭೇಟಿ ಕೊಡಿ.

2. ಕ್ರೋಮ್ಪ್ಟಾನ್ (Crompton)

ಇನ್ನೊಂದು ಪ್ರಖ್ಯಾತವಾದ ಬೋರ್ ವೆಲ್ ಪಂಪುಗಳ ತಯಾರಕರೆಂದರೆ ಅದುವೇ Crompton. ಇವರಿಗೆ ಕೂಡ ತುಂಬಾ ಚೆನ್ನಾಗಿ ಹೆಸರಿದೆ.

Crompton company logo for education purpose

Crompton ಕೇವಲ Crompton ಅಲ್ಲ ಅದನ್ನು ಈಗ ಅಂದರೆ 2017 ನಂತರ Crompton Greaves ಅಂತ ಕರೆಯುತ್ತಾರೆ. ಇವರು 75 ವರ್ಷಗಳಿಂದ ನಮ್ಮ ದೇಶದಲ್ಲಿ ಅವರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವರ ಪಂಪ್ ಸೆಟ್ ಬಗ್ಗೆ ಕೆಳಗೆ ಒಂದಷ್ಟು ಮಾಹಿತಿಯನ್ನು ನೋಡೋಣ.

  • 5 ಮುಖ್ಯ ಮಾಹಿತಿಗಳು
    • 1800 ಸರ್ವಿಸ್ ಸೆಂಟರ್ ಮತ್ತು ಇಷ್ಟೇ ಸಂಖ್ಯೆಯ ಡೀಲರ್ ಗಳು
    • 1 ವರ್ಷದ ವರೆಗೆ Warranty
    • ಸ್ವಲ್ಪ ವೋಲ್ಟೇಜ್ ಹೆಚ್ಚು ಕಮ್ಮಿ ಆದ್ರೂ ನಡೆಯುತ್ತೆ
    • ಸೋಲಾರ್ ಆಪ್ಲಿಕೇಷನ್ ಗೆ ಕೂಡ ಇವರ ಪಂಪ್ಸ್ ಉಪಯೋಗಿಸಬಹುದು
    • ತುಂಬಾ range ಪಂಪ್ ಸೆಟ್ಸ್ ಇವರ ಹತ್ರ ಇದೆ, ಅಂದರೆ waste water, swimming pool ನೀರಿನ್ನು ಕೂಡ ಇದು ಎತ್ತಬಲ್ಲದು.

ನೀವು ಇವರ ಜಾಲತಾಣಕ್ಕೆ ಭೇಟಿಕೊಟ್ಟು ಇವರ ಪಂಪ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. ಭೇಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

3. CRI ಪಂಪುಗಳು (CRI Pumps)

CRI ಪಂಪುಗಳು ಕೂಡ ತುಂಬಾ ಹೆಸರುವಾಸಿ. ಇವರು ಐದು ದಶಕಗಳಿಂದ ನಮ್ಮ ದೇಶದಲ್ಲಿದ್ದಾರೆ. ಇವರು ಪಂಪ್ ಸೆಟ್ ಹೊರತುಪಡಿಸಿ, ಇನ್ನು ಹಲವಾರು ವಸ್ತುಗಳನ್ನು ಕೂಡ ಮಾರುತ್ತಾರೆ. ಉದಾಹರಣೆಗೆ ಕೇಬಲ್ಸ್, ನೀರಿನ ವಾಲ್ವು ಗಳು ಇತ್ಯಾದಿ.

CRI logo for education purpose.
  • ಇವರ ಬಗ್ಗೆ ಇನ್ನೊಂದಷ್ಟು ಮಾಹಿತಿಯನ್ನು ಕೆಳಗೆ ನೋಡೋಣ.
    • ಕಂಪನಿಯ ಸ್ಥಾಪನೆ 1970 ರಲ್ಲಿ
    • ಇವರ ಉತ್ಪನ್ನವನ್ನು 120+ ದೇಶಗಳಿಗೆ ರಫ್ತು ಮಾಡುತ್ತಾರೆ
    • ಇವರ ಕಂಪನಿ ಕೊಯಮತ್ತೂರು ನಲ್ಲಿ ಇದೆ
    • 1500 ಡೀಲರ್ ಗಳು ಇದ್ದಾರೆ
    • ಇವರು ಕೂಡ ಒಂದು ವರ್ಷ Warranty ಕೊಡುತ್ತಾರೆ

4. ಟ್ಯಾರೊ ಪಂಪುಗಳು (Taro Pumps)

ಇವರು ಕೂಡ ಟೆಸ್ಮೋ ಬ್ರಾಂಡ್ ನಲ್ಲಿ ಮಾರಾಟ ಮಾಡುತ್ತಾರೆ. ಆದರೆ ಇವರಿಗೂ ಹಾಗೂ aqua group ಪಂಪ್ ಈಗ ಯಾವುದೇ ಸಂಬಂಧ ಇಲ್ಲ. ಇವರು ಈಗ ಬೇರೆ ಬೇರೆ ಆಗಿದ್ದಾರೆ. ಇವರದ್ದು ಒಂದು ವಿಶೇಷವೇನೆಂದರೆ, ಇವರು Warranty ಸ್ವಲ್ಪ ಹೆಚ್ಚಿನ ಸಮಯದವರೆಗೆ ಕೊಡುತ್ತಾರೆ.

Taro pump logo for education purpose
  • ಇವರ ಬಗ್ಗೆ 6 ವಿಷಯವನ್ನು ಕೆಳಗೆ ತಿಳಿಯೋಣ.
    • ಇವರ ಕಂಪನಿ ಸ್ಥಾಪನೆ 1956
    • ಇವರ ಕಂಪನಿ ಕೊಯಮತ್ತೂರು ನಲ್ಲಿದೆ
    • 1000+ ಸರ್ವಿಸ್ ಸೆಂಟರ್ ಗಳಿವೆ
    • 1000+ ಡೀಲರ್ಸ್ ಕೂಡ ಇದ್ದಾರೆ
    • ಇವರು ಎರಡು ವರ್ಷ Warranty ಕೊಡುತ್ತಾರೆ
    • ನಾನು ಇದನ್ನು ಐದು ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ತುಂಬಾ ಚೆನ್ನಾಗಿದೆ. ಏನು ಸಮಸ್ಯೆ ಇಲ್ಲಿವರೆಗೆ ಬಂದಿಲ್ಲ

5. ಕಿರ್ಲೋಸ್ಕರ್ ಪಂಪುಗಳು (Kirloskar Pumps)

ಇದು ಇನ್ನೊಂದು ಒಳ್ಳೆಯ ಬ್ರಾಂಡ್. ಇವರ ಇತಿಹಾಸ ಒಂದು ಶತಮಾನಕ್ಕಿಂತಲೂ ಅಧಿಕ. ತುಂಬಾ ಜನ ಇದನ್ನು ಉಪಯೋಗಿಸುತ್ತಿದ್ದಾರೆ. ಇವರ ಬಗ್ಗೆ ಎಷ್ಟು ಹೇಳಿದರು ಕಮ್ಮಿನೇ.

Kirloskar brand for education purpose
  • ಇವರ ಬಗ್ಗೆ 8 ಮಾಹಿತಿಯನ್ನು ಕೆಳಗೆ ನೋಡೋಣ.
    • ಕಂಪನಿಯ ಸ್ಥಾಪನೆ 1888
    • 100 ಕ್ಕೂ ಅಧಿಕ ದೇಶಗಳಿಗೆ ಇವರ ಉತ್ಪನ್ನಗಳ ರಫ್ತು
    • 650 ಕ್ಕೂ ಅಧಿಕ ಸರ್ವಿಸ್ ಸೆಂಟರ್ ಗಳು
    • ವರ್ಷಕ್ಕೆ 1.5 ಮಿಲಿಯನ್ ಗಳಷ್ಟು ಪಂಪುಗಳ ಉತ್ಪಾದನೆ !!!
    • ಇವರದ್ದು ಒಟ್ಟು 16 ಕಾರ್ಖಾನೆಗಳು ಇವೆ
    • 15000 business ಪಾರ್ಟ್ನರ್ ಗಳು ಇವರ ಜೊತೆಗಿದ್ದಾರೆ.
    • 2000 ಡೀಲರ್ಸ್ ಇದ್ದಾರೆ
    • ಒಂದು ವರ್ಷ Warranty ಇವರ ಪಂಪ್ ಗಳಿಗೆ ಕೊಡುತ್ತಾರೆ.

ಇವಿಷ್ಟು ನಮ್ಮ ದೇಶದಲ್ಲಿರುವ ಐದು ಪ್ರಖ್ಯಾತ ಬೋರ್ ವೆಲ್ ಪಂಪ್ಸ್ ತಯಾರಕರು. ಇದಲ್ಲದೆ ಇವರಿಗೆ ಸರಿಸಾಟಿಯಾಗಿ ಪೈಪೋಟಿ ಕೊಡುವ ಹಲವಾರು ಪಂಪು ತಯಾರಿಕರು ಇದ್ದಾರೆ. ಉದಾಹರಣೆಗೆ, V-Guard, Havells, Oswal, Lubi, Falcon ಇತ್ಯಾದಿ ಇತ್ಯಾದಿ.

ನೀವು ತ್ವರಿತವಾಗಿ ಎಲ್ಲ ಪಂಪ್ ಗಳ ದರವನ್ನು ನೋಡಬೇಕೆಂದರೆ https://www.indiamart.com/ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿಂದ ನಿಮಗೆ ಅನುಕೂಲವಾದರೆ ಖರೀದಿ ಕೂಡ ಮಾಡಬಹುದು.

ನಿಮಗೆ ಮೇಲೆ ತಿಳಿಸಿದ ಮಾಹಿತಿ ಉಪಯೋಗವಾಗಿದೆ ಅಂದುಕೊಂಡಿದ್ದೇನೆ. ನಿಮಗೆ ಇನ್ನು ಏನಾದರೂ ಮಾಹಿತಿ ಬೇಕೆಂದರೆ ನನಗೆ ಇಮೇಲ್ ಕಳುಹಿಸಿ. ನನ್ನ ಇಮೇಲ್ ID CoolHomeTechPraveen@gmail.com

ಧನ್ಯವಾದಗಳು 🙂
ಪ್ರವೀಣ್ ಕುಮಾರ್