ಸಾಮಾನ್ಯವಾಗಿ ನೀರಿನ ಮೋಟಾರ್ ಪಂಪುಗಳು ಏಕೆ ಕೆಟ್ಟು ಹೋಗುತ್ತದೆ ?

ಈ ಲೇಖನದಲ್ಲಿ ನಮ್ಮ ಮನೆಯ ಪಂಪುಗಳು ಕೆಟ್ಟು ಹೋಗಲು ನನಗೆ ತಿಳಿದಿರುವ 5 ಕಾರಣಗಳನ್ನು ತಿಳಿಸಿರುತ್ತೇನೆ.

ಸ್ನೇಹಿತರೆ

ಹೇಗೆ ದಿನದಿಂದ ದಿನಕ್ಕೆ ಜನಸಂಖ್ಯೆ ಏರುತ್ತಿದೆಯೋ ಹಾಗೆ ನೀರಿನ ಬೇಡಿಕೆ ಕೂಡ ಏರುತ್ತಿದೆ. ಜನಸಂಖ್ಯೆ ಏರಿಕೆಯಿಂದ ನಗರ ಹಾಗು ಹಳ್ಳಿಯ ವಿಸ್ತೀರ್ಣ ಕೂಡ ಹೆಚ್ಚುತ್ತಿದೆ. ಹೊಸ ಹೊಸ ಬಡಾವಣೆಗಳು ಮತ್ತು ಮನೆಗಳು ಹೆಚ್ಚಾಗತೊಡಗಿದೆ.

ಪ್ರತಿ ಮನೆಯಲ್ಲೂ ಕೂಡ ನೀರನ್ನು ಮೇಲೆತ್ತಲು ಪಂಪುಗಳ ಅವಶ್ಯಕತೆ ಇದ್ದೆ ಇರುತ್ತದೆ. ನಿಮ್ಮ ಮನೆಯಲ್ಲಿ ಕೊಳವೆ ಬಾವಿ ಇದ್ದರಂತೂ ಎರಡೆರಡು ಪಂಪುಗಳ ಅವಶ್ಯಕತೆ ಇರುತ್ತದೆ.

ಯಾವತ್ತಾದರೂ ಈ ಪಂಪುಗಳು ಏನಾದರೂ ಕೈ ಕೊಟ್ಟರೆ ಅಷ್ಟೇ. ಆ ದಿನ ಪಾಡು ದೇವರೇ ಬಲ್ಲ 🙂 ಅದೂ ನಮ್ಮ ನಗರ ಪ್ರದೇಶಗಳಲ್ಲಿರುವ ಮನೆಗಳಲ್ಲಿ.

ಸಾಮಾನ್ಯವಾಗಿ ಪಂಪುಗಳನ್ನು 30,000 ದಿಂದ 40,000 ಘಂಟೆಗಳ ಕಾಲ ಓಡುವಂತೆ ನಿರ್ಮಾಣ ಮಾಡಿರುತ್ತಾರೆ. ಅಂದರೆ 3.54.5 ವರ್ಷಗಳು ! ಇದು ನೀವು ಚೆನ್ನಾಗಿ ನಿರ್ವಹಣೆ ಮಾಡಿದರೆ ಮಾತ್ರ. ಹಾಗಂತ ಕೆಲವು ಪಂಪುಗಳು ಹತ್ತಾರು ವರ್ಷಗಳವರೆಗೆ ಚೆನ್ನಾಗಿ ನಡೆಯುತ್ತಾ ಬಂದಿರುವ ನಿದರ್ಶನಗಳು ಇವೆ.

ಈ ಲೇಖನದಲ್ಲಿ ನೀರಿನ ಪಂಪುಗಳು ಕೆಟ್ಟು ಹೋಗಲು ನನಗೆ ಗೊತ್ತಿರುವ 5 ಕಾರಣವನ್ನು ಹಾಗೂ ಪ್ರತಿಯೊಂದಕ್ಕೂ ಪರಿಹಾರವನ್ನು ಕೆಳಗೆ ಕೊಟ್ಟಿರುತ್ತೇನೆ. ಈ ವಿಷಯಗಳು ನಿಮಗೆ ಗೊತ್ತಿದ್ದರೆ ನಿಮ್ಮ ಪಂಪುಗಳು ಕೆಟ್ಟು ಹೋಗದಂತೆ ತಡೆಯಲು ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ.

1. ವಿದ್ಯುತ್ ಏರುಪೇರಿನಿಂದ ಪಂಪಿನ Motor ಕೆಟ್ಟುಹೋಗುವುದು (Voltage Fluctuations)

ವಿದ್ಯುತ್ ಏರುಪೇರಿನಿಂದ ಬಹಳಷ್ಟು ಮೋಟಾರ್ ಕೆಟ್ಟು ಹೋಗುವುದು ಸರ್ವೇ ಸಾಮಾನ್ಯ. ಇದು ನಮ್ಮ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಸಂಭವಿಸುತ್ತದೆ. ವಿದ್ಯುತ್ ಸರಿಯಾದ ಪ್ರಮಾಣದಲ್ಲಿ ಮೋಟಾರ್ ಗೆ ಹರಿಯಬೇಕು. ತುಂಬಾ ಹೆಚ್ಚಾಗಿ ಅಥವಾ ಕಮ್ಮಿ ಹರಿದರೆ ಮೋಟಾರ್ ವೈಂಡಿಂಗ್ ಮೇಲೆ ಹಾನಿಯಾಗುತ್ತದೆ. ಇದು ಹೇಗೆ ಆಗುತ್ತದೆ ಅಂತ ನೋಡೋಣ.

ಮೋಟಾರ್ ಗೆ ವಿದ್ಯುತ್ ಪ್ರಮಾಣ ಹೆಚ್ಚಾದಾಗ, ಮೋಟಾರ್ ವೈಂಡಿಂಗ್ ಸುಟ್ಟು ಹೋಗುತ್ತದೆ ಏಕೆಂದರೆ ಅಷ್ಟು ಕರೆಂಟ್ ತಾಳಿಕೊಳ್ಳುವ ಶಕ್ತಿ ವೈಂಡಿಂಗ್ ವೈರ್ ಗೆ ಇರುವಿದಿಲ್ಲ.

winding burnout – ಚಿತ್ರದ ಕೊಡುಗೆ pixabay

ಮೋಟಾರ್ ಗೆ ಕಮ್ಮಿ ಪ್ರಮಾಣದಲ್ಲಿ ವಿದ್ಯುತ್ ಹರಿದಾಗ, ಮೋಟಾರ್ ರೋಟರ್ ಕಡಿಮೆ ತಿರುಗಲು ಪ್ರಾರಂಭಿಸುತ್ತದೆ. ಇದರ ಸಮತೋಲನ ಕಾಪಾಡಿಕೊಳ್ಳಲು ಮೋಟಾರ್ ಪ್ರಯತ್ನ ಪಡುತ್ತದೆ. ಇದರಿಂದ ವೈಂಡಿಂಗ್ ಮೇಲೆ ಅತಿಯಾದ ಒತ್ತಡದಿಂದ short circuit ಉಂಟಾಗಿ ಮೋಟಾರ್ ವೈಂಡಿಂಗ್ ಸುಟ್ಟು ಹೋಗುತ್ತದೆ.

ಇದಕ್ಕೆ ಪರಿಹಾರ ಏನು ?

ಇದಕ್ಕೆ ಒಂದು ಪರಿಹಾರವೇನೆಂದರೆ ಸರ್ಕ್ಯೂಟ್ ಬ್ರೇಕರ್ಸ್ (Circuit Breakers) ಅನ್ನು ಅಳವಡಿಸಿಕೊಳ್ಳುವುದು. ಇದು ವಿದ್ಯುತ್ ಏರುಪೇರಿನಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ಒದಗಿಸುತ್ತದೆ.

Circuit breaker
ಸರ್ಕ್ಯೂಟ್ ಬ್ರೇಕರ್ – ಚಿತ್ರದ ಕೊಡುಗೆ pixabay
2. ಕಡಿಮೆ ಪ್ರತಿರೋಧ (Low Resistance) ದಿಂದ Motor ಕೆಟ್ಟು ಹೋಗುವುದು

ಮೋಟಾರ್ ನಲ್ಲಿ ವೈಂಡಿಂಗ್ ಬಹಳ ಪ್ರಮುಖವಾದದ್ದು. ನಿರಂತರ ಪಂಪುಗಳ ಬಳಕೆಯಿಂದ ಈ ವೈಂಡಿಂಗ್ ನಿಧಾನವಾಗಿ ತನ್ನ ಶಕ್ತಿಯನ್ನು ದಿನಕಳೆದಂತೆ ಕಳೆದುಕೊಳ್ಳುತ್ತಾ ಬರುತ್ತದೆ. ವೈಂಡಿಂಗ್ ಮೇಲಿರುವ ಇನ್ಸುಲೇಷನ್ ದುರ್ಬಲವಾಗ ತೊಡಗುತ್ತದೆ.

ಈ ಇನ್ಸುಲೇಷನ್ ದುರ್ಬಲವಾಗಲು ಬಹಳಷ್ಟು ಕಾರಣಗಳಿವೆ. ಒಂದೆರಡು ಕಾರಣಗಳನ್ನು ಹೇಳುವುದಾದರೆ, ಮೋಟಾರ್ ಒಳಗಿನ ತಾಪಮಾನ ಏರಿಕೆ, ತುಕ್ಕು ಹಿಡಿಯುವುದು, ಮೋಟಾರ್ ಒಳಗೆ ಇರುವ ನೀರು ಅಥವಾ ಆಯಿಲ್ ಸೋರುವಿಕೆ, (ಮೋಟಾರ್ ಒಳಗೆ ನೀರನ್ನು ಇಲ್ಲ ಆಯಿಲ್ ಅನ್ನು ತಾಪಮಾನ ಕಾಪಾಡಿಕೊಳ್ಳಲು ಬಳಸುತ್ತಾರೆ) ಮುಂತಾದವುಗಳು.

ಮೇಲಿನ ಕಾರಣಗಳಿಂದ ವೈಂಡಿಂಗ್ ವೈರ್ ಮೇಲಿರುವ ಇನ್ಸುಲೇಷನ್ ದುರ್ಬಲವಾಗುತ್ತದೆ. ಇದರಿಂದ ಒಂದಕ್ಕೊಂದು ವೈರ್ ತಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮೋಟಾರ್ ವೈಂಡಿಂಗ್ ಸುಟ್ಟು ಹೋಗಬಹುದು.

ಇದಕ್ಕೆ ಪರಿಹಾರ ಏನು ?

ಇದಕ್ಕೆ ಒಂದೇ ಪರಿಹಾರವೆಂದರೆ ಮೋಟಾರ್ ಅನ್ನು ೧ – ೨ ವರ್ಷಕೊಮ್ಮೆ ಪರೀಕ್ಷೆ ಮಾಡಿಸುವುದು.

3. Motor ಬಿಸಿಯಾಗಿ ಕೆಟ್ಟುಹೋಗುವುದು (Over Heating)

ಮೇಲೆ ತಿಳಿಸಿದಂತೆ ಮೋಟಾರ್ ಒಳಗಿನ ಉಷ್ಣತೆಯನ್ನು ಕಮ್ಮಿ ಮಾಡಲು ಆಯಿಲ್ ಅಥವಾ ನೀರನ್ನು ಉಪಯೋಗಿಸುತ್ತಾರೆ. ಬೋರ್ ವೆಲ್ ಮೋಟಾರ್ ಗಳಿಗೆ ನೀರನ್ನು ಉಪಯೋಗಿಸುತ್ತಾರೆ ಮತ್ತು ಪೆಟ್ರೋ ಕೆಮಿಕಲ್ ಪ್ಲಾಂಟ್ ಗಳಲ್ಲಿ ಉಪಯೋಗಿಸುವ ಮೋಟಾರ್ ಗಳಲ್ಲಿ ಆಯಿಲ್ ಉಪಯೋಗಿಸುತ್ತಾರೆ.

ನಿಮಗೆ ಒಂದು ಪ್ರಶ್ನೆ ಬರಬಹುದು, ಯಾಕೆ ಬೋರ್ವೆಲ್ ಮೋಟಾರ್ ತಂಪಾಗಿಡಲು ಆಯಿಲ್ ಉಪಯೋಗಿಸೋದಿಲ್ಲ ಅಂತ, ಅದಕ್ಕೆ ಉತ್ತರ, ಬೋರ್ವೆಲ್ ಮೋಟಾರ್ ಏನಾದರೂ ಸೋರಿಕೆ ಬಂದರೆ, ಮೋಟಾರ್ ಒಳಗಿನ ಆಯಿಲ್ ನಿಮ್ಮ ಬೋರ್ವೆಲ್ ನೀರಿಗೆ ಸೇರಿ ನೀರು ಕಲುಷಿತಗೊಳ್ಳುತ್ತದೆ. ಹಾಗಾಗಿ ನೀರನ್ನು ಮಾತ್ರ ಉಪಯೋಗಿಸುತ್ತಾರೆ.

55% ಮೋಟಾರ್ ಕೆಟ್ಟು ಹೋಗಲು ಕಾರಣವೇ ಮೋಟಾರ್ ಬಿಸಿಯಾಗುವುದು. ಮೋಟಾರ್ ಬಿಸಿಯಾಗಲು ಒಂದು ಕಾರಣವೇನೆಂದರೆ ವಿದ್ಯುತ್ ನಲ್ಲಾಗುವ ಏರುಪೇರು. ಇನ್ನೊಂದು ಕಾರಣವೇನೆಂದರೆ ಮೋಟಾರ್ ಸೋರಿಕೆಯಿಂದ ಒಳಗಿರುವ ನೀರು ಅಥವಾ ಆಯಿಲ್ ಹೊರಬರುವುದು.

ಪ್ರತಿ 10 ಡಿಗ್ರಿ ಉಷ್ಣಾಂಶ ಏರಿಕೆಯಾದಾಗಲೂ, ಮೋಟಾರ್ ವೈಂಡಿಂಗ್ ಆಯಸ್ಸು 50% ರಷ್ಟು ಕಡಿಮೆಯಾಗುತ್ತದೆ.

Motor winding
motor winding. – ಚಿತ್ರದ ಕೊಡುಗೆ pixabay

ಇದಕ್ಕೆ ಪರಿಹಾರ ಏನು ?

ಇದಕ್ಕೆ ಪರಿಹಾರವೆಂದರೆ ವಿದ್ಯುತ್ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವುದು. ಮೋಟಾರ್ ಒಳಗೆ ನೀರು ಅಥವಾ ಆಯಿಲ್ ಸರಿಯಾಗಿದೆಯಾ ಅಂತ ನೋಡುವುದು. ಯಾವುದೇ ಸೋರಿಕೆ ಕಂಡುಬಂದರೆ ಅದನ್ನು ತಕ್ಷಣ ಸರಿಪಡಿಸುವುದು.

4. ಮಾಲಿನ್ಯ (Contamination)

ಮೋಟಾರ್ repair ಮಾಡುವಾಗ ಕೆಲವುಸಲ, ಮರಳು, ಸಣ್ಣ screw ಮುಂತಾದವುಗಳು ಮೋಟಾರ್ ಒಳಗೆ ಸೇರಿಕೊಳ್ಳುತ್ತವೆ. ಇದು ಒಂದೊಂದು ಸಲ ಗೊತ್ತಾಗುವುದಿಲ್ಲ. ಇದು ಮೋಟಾರ್ ಸ್ವಿಚ್ ಆನ್ ಮಾಡಿದಾಗ, ಬೇರಿಂಗ್ ಮಧ್ಯ, ಫ್ಯಾನ್ ಮಧ್ಯ ಸಿಕ್ಕಿಹಾಕಿಕೊಂಡು ಮೋಟಾರ್ ವಿಪರೀತ vibration ಹೆಚ್ಚಾಗಲು ಕಾರಣವಾಗುತ್ತವೆ. ಇದರಿಂದ ಮೋಟಾರ್ ಸೋರಿಕೆ ಉಂಟಾಗಬಹುದು ಅಥವಾ ಮಿತಿಮೀರಿದ ಉಷ್ಣಾಂಶ ದಿಂದ ಮೋಟಾರ್ ಸುಟ್ಟು ಹೋಗಬಹುದಾದ ಸಾಧ್ಯತೆ ಇರುತ್ತದೆ.

ಇದಕ್ಕೆ ಪರಿಹಾರ ಏನು ?

ಮೋಟಾರ್ ಅಥವಾ ಪಂಪು repair ಮಾಡುವ ಜಾಗವನ್ನು ಶುದ್ಧವಾಗಿಟ್ಟುಕೊಳ್ಳುವುದು. ಒರೆಸುವ ಬಟ್ಟೆಗಳಿಗೆ ಮರಳು ಹತ್ತದಂತೆ ನೋಡಿಕೊಳ್ಳುವುದು. ಹಾಗೂ ಸಣ್ಣ ಸಣ್ಣ ಮೋಟಾರ್ ಭಾಗಗಳನ್ನು (screws, nuts, washers etc) ರಿಪೇರ್ ಮಾಡುವ ಜಾಗದಿಂದ ದೂರ ಇಟ್ಟುಕೊಳ್ಳುವುದು.

5. ಅತಿಯಾದ ಕಂಪನ (Vibration)

ಮೋಟಾರ್ ಅತಿಯಾದ ಕಂಪನಕ್ಕೆ ಕೆಲವು ಕಾರಣಗಳೆಂದರೆ, ಮೋಟಾರ್ ಹಾಗು ಪಂಪ್ ಒಳಗಿನ ಶಾಫ್ಟ್ (ಉದಾಹರಣೆಗೆ rotor shaft, impeller shaft) ಸರಿಯಾಗಿ ಜೋಡಣೆ ಮಾಡದೇ ಇರುವುದು. ಕಂಪನಕ್ಕೆ ಇನ್ನೊಂದು ಕಾರಣವೇನೆಂದರೆ ಮೋಟಾರ್/ಪಂಪುನ್ನು ಸರಿಯಾಗಿ ಸಮತಟ್ಟಾದ ಹಾಗು ಗಟ್ಟಿಯಾದ ಸ್ಥಳದಲ್ಲಿ ಇಡದೆ ಇರುವುದು.

ಅತಿಯಾದ ಕಂಪನದಿಂದ ಒಳಗಿನ ಬೇರಿಂಗ್ ಮೇಲೆ ಅಧಿಕ ಒತ್ತಡ ಉಂಟಾಗಿ ಮೋಟಾರ್ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ.

ಇದಕ್ಕೆ ಪರಿಹಾರ ಏನು ?

ಮೋಟಾರ್ ಅನ್ನು ಸಮತಟ್ಟಾದ ಸ್ಥಳದಲ್ಲಿ ಇರಿಸುವುದು. ಇದನ್ನು ಮಾಡಿದ ಮೇಲೂ ಕೂಡ ಏನಾದರೂ ಕಂಪನದ ಸಮಸ್ಯೆ ಪರಿಹಾರವಾಗಿಲ್ಲ ವೆಂದರೆ ಬೇರಿಂಗ್ ಮತ್ತು alignment ಚೆಕ್ ಮಾಡಿಸುವುದು.

ಕೊನೆಯ ಮಾತು

ಮೇಲೆ ತಿಳಿಸಿದ ಕೆಲವು ಸಮಸ್ಯೆಗಳನ್ನೂ ನೀವೇ ಪರಿಹಾರ ಮಾಡಿಕೊಳ್ಳಬಹುದು. ನಿಮಗೆ ಇವೆಲ್ಲದರ ಬಗ್ಗೆ ಸ್ವಲ್ಪ ಅರಿವು ಕಡಿಮೆ ಇದ್ದರೆ ದಯವಿಟ್ಟು ಪರಿಣಿತರನ್ನು ಸಂಪರ್ಕ ಮಾಡಿ. Motor ನಲ್ಲಿ ಅಧಿಕ ವೋಲ್ಟೇಜ್ ವಿದ್ಯುತ್ ಬಳಸುವುದರಿಂದ ಮುನ್ನೆಚ್ಚರಿಕೆ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಹೋಗಬೇಡಿ.

ನಿಮಗೆ ಇಲ್ಲಿ ತಿಳಿಸಿದ ಮಾಹಿತಿ ಸಹಾಯವಾಗುತ್ತದೆ ಅಂದುಕೊಂಡಿದ್ದೇನೆ. ನಿಮಗೆ ಇನ್ನು ಏನಾದರೂ ಹೆಚ್ಚಿಗೆ ಮಾಹಿತಿ ಬೇಕಾದರೆ ನನಗೆ ಇಮೇಲ್ ಮಾಡಿ. ನನ್ನ ಇಮೇಲ್ ID ‘CoolHomeTechPraveen@gmail.com’. ಈ ಲೇಖನವನ್ನು ಬೇರೆಯವರ ಜೊತೆ ಹಂಚಿಕೊಳ್ಳಿ 🙂

ಧನ್ಯವಾದಗಳು 🙂
ಪ್ರವೀಣ್ ಕುಮಾರ್